ಛಂದೋಂಬುಧಿ
ಆದರೂ ತನ್ನ
ಕಾಲದಲ್ಲಿ ನಡೆಯುತ್ತಿದ್ದ
ಬದಲಾವಣೆಗಳನ್ನು
ನಾಗವರ್ಮನು ಸೂಕ್ಷ್ಮವಾಗಿ
ಗಮನಿಸಿದ್ದನು. ಅಂಶಗಣಘಟಿತವಾದ
ಛಂದೋರೂಪಗಳು, ಮಾತ್ರಾಗಣವಾಗಿ
ಬದಲಾಗುತ್ತಿದ್ದ
ಪ್ರಕ್ರಿಯೆಯನ್ನು
ಅವನು ವಿವರಿಸುತ್ತಾನೆ.
ಹಾಗೆಯೇ ಚಂಪೂ ಕಾವ್ಯಗಳಲ್ಲಿ
ಪ್ರಚಲಿತವಾಗಿದ್ದ
ಸಂಸ್ಕೃತ ಛಂದೋಬಂಧಗಳೂ
ಅವನಿಗೆ ಅಪರಿಚಿತವಾಗಿರಲಿಲ್ಲ.
ಅವುಗಳನ್ನೂ ಅವನು
ವರ್ಣಿಸುತ್ತಾನೆ.
ಅದರಲ್ಲಿಯೂ, ಕನ್ನಡ
ಕಾವ್ಯಗಳಲ್ಲಿ ವಿಪುಲವಾಗಿ
ಬಳಕೆಯಲ್ಲಿರುವ
ಖ್ಯಾತಕರ್ನಾಟಕ
ವೃತ್ತಗಳನ್ನು ಗುರುತಿಸಿ
ವಿವರಿಸಿದ್ದು ಅವನ
ಸಾಧನೆ. ಛಂದೋಂಬುಧಿಯಲ್ಲಿ
ಆರು ಅಧಿಕರಣಗಳಿವೆ.
ಅದು ಲೇಖಕನು ತನ್ನ
ಪತ್ನಿಗೆ ಹೇಳಿದಂತೆ
ರಚಿತವಾಗಿದೆ. ಇದರಿಂದ
ನಿರೂಪಣೆಗೆ ಒಂದು
ಹೊಸ ಹುರುಪು ಬಂದಿದೆ.
ಮೊದಲ ಭಾಗದಲ್ಲಿ
ಛಂದಸ್ಸಿಗೆ ಸಂಬಂಧಿಸಿದ
ಪ್ರಾಥಮಿಕ ಮಾಹಿತಿಯನ್ನು
ಕೊಟ್ಟ ನಂತರ, ಕನ್ನಡದ
ಎಲ್ಲ ಛಂದೋರೂಪಗಳ
ಮೂಲವಾದ ಅಕ್ಷರ ಛಂದಸ್ಸು,
ಮಾತ್ರಾಛಂದಸ್ಸು
ಮತ್ತು ಅಂಶಛಂದಸ್ಸುಗಳ
ವಿವರಣೆಗಳಿವೆ. ಕರ್ನಾಟಕ
ವಿಷಯಜಾತಿ ಎಂದರೆ,
ಅಂಶಗಣಘಟಿತವೂ ಕನ್ನಡಕ್ಕೆ
ಸಹಜವೂ ಆದ ಛಂದೋಬಂಧಗಳನ್ನು
ವಿವರಿಸುವ ಐದನೆಯ
ಅಧಿಕರಣವೇ ಈ ಕೃತಿಯ
ಹೃದಯ.
ಹೀಗೆ ಛಂದೋಂಬುಧಿಯು
ಪ್ರಾಚೀನ ಕನ್ನಡದ
ಅಧ್ಯಯನಕ್ಕೆ ಬೇಕಾದ
ತಳಹದಿಯನ್ನು ಹಾಕಿಕೊಡುವ
ಆದ್ಯ ಕೃತಿಗಳಲ್ಲಿ
ಒಂದು.
ಅ. ಛಂದೋಂಬುಧಿ,
ಸಂ. ಬಸವಲಿಂಗಯ್ಯ
ಮಡಿವಾಳಯ್ಯ ಕುಂದಗೋಳ,
ಸವಣೂರು, 1862 (ಇದೇ ಆವೃತ್ತಿಯ
ಕಲ್ಲಚ್ಚಿನ ಮುದ್ರಣವು,
ಧಾರವಾಡದಲ್ಲಿ ಪ್ರಕಟವಾಯಿತು.
ಆ. ಛಂದೋಂಬುಧಿ,
ಸಂ. ಫರ್ಡಿನಂಡ್
ಕಿಟ್ಟಲ್, 1874
ಇ. ಛಂದೋಂಬುಧಿ,
ಸಂ. ಎಂ.ಎ. ರಾಮಾನುಜ
ಅಯ್ಯಂಗಾರ್ ಮತ್ತು
ಎಸ್ .ಜಿ.ನರಸಿಂಹಾಚಾರ್,
ಕರ್ನಾಟಕ ಕಾವ್ಯಕಲಾನಿಧಿಮಾಲೆ,
1919(?)
ಈ. ಕನ್ನಡ
ಛಂದಸ್ಸಂಪುಟ, ಎಲ್.
ಬಸವರಾಜು, 1974, ಗೀತಾ
ಬುಕ್ ಹೌಸ್, ಮೈಸೂರು.
7.
ಮುಂದಿನ
ಓದು ಮತ್ತು ಲಿಂಕುಗಳು:
ಅ. ಕನ್ನಡ ಛಂದಸ್ಸಿನ
ಚರಿತ್ರೆ, ಸಂ. ಸಿ.ಪಿ.
ಕೃಷ್ಣಕುಮಾರ್, ಕನ್ನಡ
ಅಧ್ಯಯನ ಸಂಸ್ಥೆ,
ಮೈಸೂರು ವಿಶ್ವವಿದ್ಯಾಲಯ,
ಮೈಸೂರು.
ಆ. ಕನ್ನಡ
ಛಂದಸ್ಸು, ಟಿ.ವಿ.ವೆಂಕಟಾಚಲಶಾಸ್ತ್ರೀ,
ಮೈಸೂರು.
ಇ. ಛಂದೋಂಬುಧಿಯನ್ನು
ಸಂಪಾದಿಸಿರುವ ಮಹನೀಯರು
ತಮ್ಮ ಆವೃತ್ತಿಗಳಿಗೆ
ಬರೆದಿರುವ ಪ್ರಸ್ತಾವನೆಗಳು.
ಮುಖಪುಟ
/ ಪಾರಂಪರಿಕ
ತಿಳಿವಳಿಕೆಯ
ಆಕರಗಳು