ಗಿರಿಜಾಕಲ್ಯಾಣಮಹಾಪ್ರಬಂಧಂ
ಅ. 1905, ಎಸ್.ಜಿ. ನರಸಿಂಹಾಚಾರ್ ಮತ್ತು ಎಂ.ಎ. ರಾಮಾನುಜ ಅಯ್ಯಂಗಾರ್, ಕಾವ್ಯಕಲಾನಿಧಿಮಾಲೆ, ಮೈಸೂರು.
ಆ.
1943, ಶಿ.ಚ. ನಂದೀಮಠ, ಲಿಂಗಾಯತ
ವಿದ್ಯಾಭಿವೃದ್ಧಿ
ಸಂಸ್ಥೆ, ಧಾರವಾಡ.
ಇ. 1977, ಎಂ.ಎಸ್.
ಸುಂಕಾಪುರ, ಧಾರವಾಡ
ಈ.
1951, ಎಚ್. ದೇವೀರಪ್ಪ
ಮತ್ತು ದೇ. ಜವರೇಗೌಡ,
ಸಂಗ್ರಹ ಆವೃತ್ತಿ,
ಮೈಸೂರು
ಉ. 1976, ಎಂ.ಜಿ. ನಂಜುಂಡಾರಾಧ್ಯ, (ಗದ್ಯಾನುವಾದದೊಂದಿಗೆ) ಕನ್ನಡ ಸಾಹಿತ್ಯ ಪರಿಷತ್ತು, ಬೆಂಗಳೂರು.
ಗಿರಿಜಾಕಲ್ಯಾಣವು, ಪಂಪಾಕ್ಷೇತ್ರದ ವರ್ಣನೆ, ಕಾಮದಹನದ ಪ್ರಸಂಗ, ಶಿವನು ಮಾರುವೇಷದಲ್ಲಿ ಪಾರ್ವತಿಯನ್ನು ಭೇಟಿಯಾಗುವ ಪ್ರಸಂಗ ಮುಂತಾದ ಸನ್ನಿವೇಶಗಳ ಕಾವ್ಯಸೌಂದರ್ಯಕ್ಕಾಗಿ ಪ್ರಸಿದ್ಧವಾಗಿದೆ. ಇಲ್ಲಿ ಹರಿಹರನು ನಡುಗನ್ನಡದ ಬದಲಾಗಿ ಹಳಗನ್ನಡದ ಕಡೆಗೆ ಒಲವು ತೋರಿಸಿದ್ದಾನೆ. ಈ ಪ್ರವೃತ್ತಿಯು ರಗಳೆಗಳಲ್ಲಿ ಬದಲಾಯಿತು. ಅದಲ್ಲದೆ, ಸಂಸ್ಕೃತದಿಂದ ತೆಗೆದುಕೊಂಡ ಅನೇಕ ಛಂದೋರೂಪಗಳನ್ನು ಬಳಸುವುದು ಅನಿವಾರ್ಯವಾದ ಚಂಪೂರೂಪವನ್ನು ಅವನು ಬಳಸಿರುವುದು ಕುತೂಹಲಕರ. ಒಟ್ಟಿನಲ್ಲಿ ಹರಿಹರನ ಮನೋಧರ್ಮ ಹಾಗೂ ಆ ಕಾಲದ ಸಾಹಿತ್ಯಕ ಒಲವುಗಳು ಎರಡರಿಂದಲೂ ಕೊಂಚ ಭಿನ್ನವಾಗುವ ಕೃತಿ. ಆದರೂ ಇದರಲ್ಲಿ ಹರಿಹರನ ಪ್ರತಿಭೆಗೆ ಹಲವು ನಿದರ್ಶನಗಳು ದೊರೆಯುತ್ತವೆ.
ಅ. ಹಂಪೆಯ ಹರಿಹರ, 1939, ಡಿ.ಎಲ್. ನರಸಿಂಹಾಚಾರ್, ಮೈಸೂರು ವಿಶ್ವವಿದ್ಯಾಲಯ, ಮೈಸೂರು.
ಆ. ಹರಿಹರದೇವ,
1932, ಸಂ. ಕೆ.ಜಿ.ಕುಂದಣಗಾರ,
ರಾಜಾರಾಮ ಕಾಲೇಜು,
ಕೊಲ್ಲಾಪುರ
ಇ. ಹರಿಹರ-
ಸಾಂಸ್ಕೃತಿಕ ಮುಖಾಮುಖಿ,
ಶಿವಾನಂದ ವಿರಕ್ತಮಠ,
ಕನ್ನಡ ವಿಶ್ವವಿದ್ಯಾಲಯ,
ಹಂಪಿ.
ಈ. ಶಿವಾನಂದ
ವಿರಕ್ತಮಠ ಅವರು
ಸಂಪಾದಿಸಿರುವ ಕೃತಿಯಲ್ಲಿರುವ
ವಿವರವಾದ ಗ್ರಂಥಸೂಚಿ.