ಜಗನ್ನಾಥವಿಜಯಂ
ಎರಡನೆಯ ಮುದ್ರಣ: ಮೈಸೂರಿನ
ಓರಿಯೆಂಟಲ್ ಲೈಬ್ರರಿಯಿಂದ
ಇನ್ನೂ ನಾಲ್ಕು ಓಲೆಗರಿ ಪ್ರತಿಗಳು.
ಮೂರನೆಯ
ಮುದ್ರಣ: ಹೊಸ ಹಸ್ತಪ್ರತಿಗಳನ್ನು
ಪರಿಗಣಿಸಿಲ್ಲ.
ನಾಲ್ಕನೆಯ
ಮುದ್ರಣ: ಹೊಸ ಹಸ್ತಪ್ರತಿಗಳನ್ನು
ಪರಿಗಣಿಸಿಲ್ಲ
ಐದನೆಯ ಮುದ್ರಣ: ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ದೊರೆತ ಇನ್ನೂ ಎರಡು ಓಲೆಗರಿ ಪ್ರತಿಗಳನ್ನು ಬಳಸಿಕೊಂಡಿದೆ.
ಅ.
ಚಾವಲಿ ರಾಮಸ್ವಾಮಿಶಾಸ್ತ್ರೀ,
1896, ವಸುಮತೀ ಮುದ್ರಾಕ್ಷರಶಾಲೆ,
ಮದ್ರಾಸು
ಆ.
ಎಸ್.ಜಿ. ನರಸಿಂಹಾಚಾರ್,
1904, ಮೈಸೂರು ಓರಿಯೆಂಟಲ್
ಲೈಬ್ರರಿ, ಮೈಸೂರು.
ಇ.
ಆರ್. ಶಾಮಾಶಾಸ್ತ್ರೀ,
1923, ಮೈಸೂರು ಓರಿಯೆಂಟಲ್
ಲೈಬ್ರರಿ, ಮೈಸೂರು
ಈ.
ಎಂ.ಆರ್.ವರದಾಚಾರ್
ಅವರ ಗದ್ಯಾನುವಾದ,
1976, ಕನ್ನಡ ಸಾಹಿತ್ಯ
ಪರಿಷತ್ತು, ಬೆಂಗಳೂರು
ಉ.
ಜಿ.ಜಿ. ಮಂಜುನಾಥನ್,
1996, ಕನ್ನಡ ಮತ್ತು ಸಂಸ್ಕೃತಿ
ಇಲಾಖೆ, ಬೆಂಗಳೂರು
ಊ. ಎನ್. ಅನಂತರಂಗಾಚಾರ್, ಸಂಗ್ರಹಿತ ಆವೃತ್ತಿ, 1960
ಈ
ಗದ್ಯೀಯವಾದ ಸಂಗ್ರಹವು
ರುದ್ರಭಟ್ಟನ ನಿರೂಪಣ
ಪ್ರತಿಭೆ ಮತ್ತು
ಪಾಂಡಿತ್ಯಗಳಿಗೆ
ನ್ಯಾಯ ದೊರಕಿಸುವುದಿಲ್ಲ.
ಇಂತಹ ಕೃತಿಗಳು ತಮಗೆ
ಸಮಕಾಲೀನವಾದ ಜೀವನಶೈಲಿಗಳು
ಮತ್ತು ಜೀವನದರ್ಶನಗಳಿಗೆ
ಕನ್ನಡಿ ಹಿಡಿಯುತ್ತವೆ.
ಕೃಷ್ಣನು ಇಂದ್ರನ
ವಿರುದ್ಧ ಮಾಡಿದ
ಬಂಡಾಯವು ಹಿಂದೂಧರ್ಮದ
ಬೆಳವಣಿಗೆಯಲ್ಲಿ
ಒಂದು ಘಟ್ಟಕ್ಕೆ
ಒಡ್ಡಿದ ಪ್ರತಿಮೆಯಾದರೆ,
ಕೃಷ್ಣನು ‘ರಾಕ್ಷಸ’ರೊಂದಿಗೆ
ಮಾಡುವ ಯುದ್ಧಗಳು
ಸಂಸ್ಕೃತಿಗಳ ನಡುವಿನ
ಮಹತ್ವದ ಮುಖಾಮುಖಿಯನ್ನು
ದಾಖಲೆ ಮಾಡುತ್ತವೆ.
ರುದ್ರಭಟ್ಟನ
ಶೈಲಿಯು ಬಹಳವಾಗಿ
ಸಂಸ್ಕೃತೀಕರಣವನ್ನು
ಹೊಂದಿದೆ. ಅದರಲ್ಲಿ
ಲೆಕ್ಕವಿಲಲ್ದಷ್ಟು
ಸಮಾಸ ಪದಗಳಿವೆ.
ಅನೇಕ ಬಾರಿ ಒಬ್ಬ
ಕವಿಯು ಆರಿಸಿಕೊಳ್ಳುವ
ಛಂದೋರೂಪಗಳಿಗೂ
ಅವನು ುಪಯೋಗಿಸಬೇಕಾಗುವ
ಶಬ್ದಕೋಶದ ಸ್ವರೂಪಕ್ಕೂ
ನಿಕಟವಾದ ಸಂಬಂಧವಿರುತ್ತದೆ.
ರುದ್ರಭಟ್ಟನು ಶಿವಶರಣರ
ಸಮಕಾಲೀನನಾದರೂ
ಇಂತಹುದೊಂದು ಶೈಲಿಯನ್ನು
ಬಳಸಿರುವುದು, ಆಗಿನ
ಕಾಲದಲ್ಲಿ ವಿಭಿನ್ನ
ಧರ್ಮಗಳಿಗೆ ಸೇರಿದ
ಕವಿಗಳ ನಡುವೆ ಇರಬಹುದಾದ
ಪ್ರತ್ಯೇಕೀಕರಣಕ್ಕೆ
ಸಾಕ್ಷಿಯಾಗಿದೆ.
ಅವರೆಲ್ಲರೂ ಬೇರೆ
ಬೇರೆ ಕೂಡುಕೋಣೆಗಳಲ್ಲಿಯೇ
ಇರುತ್ತಿದ್ದರೇನೋ.
ಏನೇ ಆದರೂ ಅಂತಹ
ಅನೇಕ ಕೃತಿಗಳಂತೆ
ಜಗನ್ನಾಥವಿಜಯವನ್ನು
ಕೂಡ ಶುದ್ಧವಾದ ಸಾಹಿತ್ಯದೃಷ್ಟಿಯ
ಬದಲಾಗಿ, ಸಾಂಸ್ಕೃತಿಕ
ಆಧ್ಯಯನದ ನೆಲೆಯಲ್ಲಿ
ನೋಡುವುದು ಹೆಚ್ಚು
ಉಪಯುಕ್ತವಾದುದು.
ರುದ್ರಭಟ್ಟನು ‘ರಸಕಳಿಕಾ’ ಎಂಬ ಇನ್ನೊಂದು ಕೃತಿಯನ್ನು ಬರೆದಿರುವನೆಂದು ಹೇಳಲಾಗಿದೆ. ಅದು ಸಂಸ್ಕೃತ ಭಾಷೆಯಲ್ಲಿರುವ, ಅಲಂಕಾರಶಾಸ್ತ್ರವನ್ನು ಕುರಿತ ಕೃತಿ. ಈ ಕೃತಿಯು ಲಬ್ಧವಿದ್ದರೂ ಅದರ ಕರ್ತೃತ್ವದ ಬಗ್ಗೆ ವಿವಾದಗಳಿವೆ
ಅ.
ರುದ್ರಭಟ್ಟ, ಗುಂಡ್ಮಿ
ಚಂದ್ರಶೇಖರ ಐತಾಳ,
1970, ಪ್ರಸಾರಾಂಗ, ಮೈಸೂರು
ವಿಶ್ವವಿದ್ಯಾಲಯ
ಆ.
ಶ್ರೀ ಕೃಷ್ಣಕಥೆಯ
ಉಗಮ ಮತ್ತು ವಿಕಾಸ,
ಪ್ರಧಾನ ಗುರುದತ್ತ,
ಕನ್ನಡ ಅಧ್ಯಯನಸಂಸ್ಥೆ,
ಮೈಸೂರು ವಿಶ್ವವಿದ್ಯಾಲಯ,
ಮೈಸೂರು
ಇ.
ಶ್ರೀ ಕೃಷ್ಣಚರಿತೆ,
ಕೆ.ವೆಂಕಟರಾಮಪ್ಪ,
ಮೈಸೂರು ವಿಶ್ವವಿದ್ಯಾಲಯ,
ಮೈಸೂರು
l