ಜೈಮಿನಿ
ಭಾರತ
ಅ. ‘ಟೀಕಾ ಜೈಮಿನಿ
ಭಾರತವು’ ( ವ್ಯಾಖ್ಯಾನ
ಮತ್ತು ಸಾರಾಂಶ ಸಹಿತ),
ಬಿ.ಎಂ.ಸಿದ್ದಲಿಂಗ
ಶಾಸ್ತ್ರೀ, 1897, ವಾಣೀವಿಲಾಸ
ಬುಕ್ ಡಿಪೋ, ಬೆಂಗಳೂರು.
ಆ. ‘ಜೈಮಿನಿ ಭಾರತ’(ಮೂರು ಸಂಪುಟಗಳಲ್ಲಿ)
( ವ್ಯಾಖ್ಯಾನ ಮತ್ತು
ಸಾರಾಂಶ ಸಹಿತ), 1888,
ರಾಜರಾಜೇಶ್ವರಿ
ಮುದ್ರಾಕ್ಷರ ಶಾಲೆ,
ಬೆಂಗಳೂರು
ಇ. ‘ಕರ್ಣಾಟಕ
ಜೈಮಿನಿ ಭಾರತವು’, ಪಿ.ಆರ್. ಕರಿಬಸವ
ಶಾಸ್ತ್ರೀ, 1912.
ಈ. ಪ್ರತಿಪದಾರ್ಥ
ಮತ್ತು ತಾತ್ಪರ್ಯಗಳೊಂದಿಗೆ, ಸಂ. ದೊಡ್ಡಬೆಲೆ
ನಾರಾಯಣಶಾಸ್ತ್ರೀ,
1912, ಟಿ.ಎನ್. ಕೃಷ್ಣಯ್ಯಶೆಟ್ಟಿ,
ಬೆಂಗಳೂರು
ಉ. ಸಂ. ಬಿ. ಭೀಮಸೇನರಾವ್,
1939, ಟಿ.ಎನ್. ಕೃಷ್ಣಯ್ಯಶೆಟ್ಟಿ,
ಬೆಂಗಳೂರು
ಊ. ‘ಜೈಮಿನೀಭಾರತ
ಸಂಗ್ರಹ’, ಸಂ. ದೇ.ಜವರೇಗೌಡ,
1959, ವಯಸ್ಕರ ಶಿಕ್ಷಣ
ಸಮಿತಿ, ಮೈಸೂರು.
ಋ. ಸಂ.
ಬಿ.ಎಸ್. ಸಣ್ಣಯ್ಯ
ಮತ್ತು ರಾಮೇಗೌಡ,
1993, ಮೈಸೂರು ವಿಶ್ವವಿದ್ಯಾಲಯ,
ಮೈಸೂರು.
(ಇನ್ನೂ ಹಲವು ಜನಪ್ರಿಯ ಆವೃತ್ತಿಗಳು, ಸಂಗ್ರಹಗಳು ಮತ್ತು ಭಾಗಶಃ ಪ್ರಕಟಣೆಗಳು ಹೊರಬಂದಿವೆ.)
ಆದರೆ, ಲಕ್ಷ್ಮೀಶನ
ಕೃತಿಯ ಜನಪ್ರಿಯತೆಗೆ,ತನ್ನ
ಕಾವ್ಯವಸ್ತುವಿನ
ನಿರ್ವಹಣೆಯಲ್ಲಿ
ಕವಿಯು ತೋರಿಸಿರುವ
ಅನುಪಮವಾದ ಕುಶಲತೆಯೇ
ಕಾರಣ. ವಾಸ್ತವವಾಗಿ
ಜೈಮಿನಿ ಭಾರತವು
ಸ್ವತಂತ್ರವಾದ ಕಥೆಗಳ
ಗೊಂಚಲು. ಯಾಗದ ಕುದುರೆಯ
ಹಿಂದೆ ಚಲಿಸುತ್ತಾ
ಲೋಕಪರ್ಯಟನೆ ಮಾಡುವ
ಅರ್ಜುನನು ಈ ಕಥೆಗಳನ್ನು
ಪೋಣಿಸುವ ದಾರ. ಆದರೆ,
ಈ ಕಾವ್ಯದ್ದು, ಬಿಡುಬೀಸಾಗಿ
ಚಲಿಸುವ ನಿಧಾನಗತಿಯೇ
ವಿನಾ ಯುದ್ಧಕಾತರವಾದ
ನಾಗಾಲೋಟವಲ್ಲ. ಲಕ್ಷ್ಮೀಶನಿಗೆ
ನಿರೂಪಣೆಯ ಕೌಶಲ್ಯ
ಮತ್ತು ಭಾಷೆಯ ಮೇಲಿನ
ಪ್ರಭುತ್ವಗಳೆರಡೂ
ಇವೆ. ಅವನು ನಿಸರ್ಗಸೌಂದರ್ಯವನ್ನು
ಗುರುತಿಸಬಲ್ಲ. ಅಂತೆಯೇ
ಮನುಷ್ಯಸ್ವಭಾವದ
ಆಳವಾದ ಪರಿಚಯವೂ
ಅವನಿಗಿದೆ. ಈ ಕಾವ್ಯದಲ್ಲಿ
ಬರುವ ಸೀತಾಪರಿತ್ಯಾಗದ
ಹೃದಯಸ್ಪರ್ಶಿಯಾಗಿದ್ದು,
ಸರಿಯಾಗಿ ವ್ಯಾಖ್ಯಾನ
ಮಾಡಿದಾಗ ಅದು ಸ್ತ್ರೀವಾದೀ
ಆಯಾಮಗಳನ್ನು ಪಡೆಯಬಲ್ಲುದು.
ಚಂಡಿ-ಉದ್ಧಾಲಕರ
ಪ್ರಸಂಗದಲ್ಲಿ ಲಕ್ಷ್ಮೀಶನ
ಹಾಸ್ಯಪ್ರಜ್ಞೆಯು
ಪ್ರಖರವಾಗಿ ಕಂಡುಬರುತ್ತದೆ.
ಚಂದ್ರಹಾಸನ ಕಥೆಯು
ಕನ್ನಡ ಓದುಗರಿಗೆ
ಪ್ರಿಯವಾದ ಇನ್ನೊಂದು
ಸಂದರ್ಭ. ಕವಿಯು
ತನ್ನ ಕಾವ್ಯದಲ್ಲಿ
ವೀರ, ಶೃಂಗಾರ, ಕರುಣ,
ಹಾಸ್ಯ ಮುಂತಾದ ರಸಗಳನ್ನು
ಅಂತೆಯೇ ಭಕ್ತಿಯಂತಹ
ಭಾವನೆಗಳನ್ನು ನಿರೂಪಿಸುವ
ಅವಕಾಶಗಳನ್ನು ಸೃಷ್ಟಿಸಿಕೊಳ್ಳುತ್ತಾನೆ
ಮತ್ತು ಅವುಗಳನ್ನು
ಸಮರ್ಥವಾಗಿ ನಿರ್ವಹಿಸುತ್ತಾನೆ.
ಈ ಕವಿಯ ಪ್ರತಿಭೆಯು
ಅವನು ಬಳಸುವ ಉಪಮೆಗಳಲ್ಲಿ
ಹಾಗೂ ಸಂಗೀತಕ್ಕೆ
ಸಮೀಪವೆನ್ನುವಷ್ಟು
ಮಧುರವಾದ ಭಾಷೆಯ
ಬಳಕೆಯಲ್ಲಿ ನಿರ್ದಿಷ್ಟವಾಗಿ
ಕಾಣಿಸಿಕೊಳ್ಳುತ್ತದೆ.
ಅವನನ್ನು ‘ಉಪಮಾಲೋಲ’, ‘ನಾದಲೋಲ’ ಎಂದೇ ಕರೆಯಲಾಗಿದೆ.
ಕನ್ನಡದ ಶ್ರೇಷ್ಠ ವಿಮರ್ಶಕರಾದ ಕುವೆಂಪು, ಬೇಂದ್ರೆ, ಮಾಸ್ತಿ, ಕುರ್ತಕೋಟಿ, ಚಿ.ಎನ್. ರಾಮಚಂದ್ರನ್ ಅವರು ಲಕ್ಷ್ಮೀಶನ ಬಗ್ಗೆ ವಿವರವಾದ ಮತ್ತು ಒಳನೋಟಗಳಿಂದ ಕೂಡಿದ ವಿಮರ್ಶೆಯನ್ನು ಮಾಡಿದ್ದಾರೆ.
ಅ. ‘ಕವಿ ಲಕ್ಷ್ಮೀಶ’, 1933, ಕರ್ನಾಟಕಸಂಘ,
ಚಿಕ್ಕಮಗಳೂರು
ಆ. ‘ಲಕ್ಷ್ಮೀಶ’, ಎನ್ ಅನಂತರಂಗಾಚಾರ್,
1955(ಎರಡನೆಯ ಮುದ್ರಣ),
ಮೈಸೂರು ವಿಶ್ವವಿದ್ಯಾಲಯ,
ಮೈಸೂರು
ಇ. ‘ಕವಿ ಲಕ್ಷ್ಮೀಶನ
ಕಾವ್ಯಾಲಂಕಾರ ವೈಭವ’, ರಾ.ನ. ಮಳಗಿ,
1960.
ಈ. ‘ಕಾವ್ಯವಿಹಾರ’, ಕುವೆಂಪು
ಉ. ‘ಸಾಹಿತ್ಯದ
ವಿರಾಟ್ ಸ್ವರೂಪ’, ದ.ರಾ.ಬೇಂದ್ರೆ,
1975, ಸಮಾಜ ಪುಸ್ತಕಾಲಯ,
ಧಾರವಾಡ.
ಊ. ‘ಲಕ್ಷ್ಮೀಶನ ಜೈಮಿನಿ ಭಾರತ-ಒಂದು ಅಧ್ಯಯನ’, ವಾಮನ ಡಿ. ಬೇಂದ್ರೆ, 1979, ಗೀತಾ ಬುಕ್ ಹೌಸ್, ಮೈಸೂರು.
18.
ಅ. Jaimini Bharata
- vaachana & vyaakyaana
by Dr.Nagavalli Nagaraj ...
ಆ. The Jaimini Bharata :
celebrated Canarese poem.