ಕಬ್ಬಿಗರ
ಕಾವ
ಅ.
1930, ಎಂ.ಎ. ರಾಮಾನುಜ
ಅಯ್ಯಂಗಾರ್
ಆ.
1964, ದೇ. ಜವರೇಗೌಡ, ಶಾರದಾಮಂದಿರ,
ಮೈಸೂರು
ಇ.
1976, ಆರ್.ವಿ. ಕುಲಕರ್ಣಿ,
(ಗದ್ಯಾನುವಾದದೊಂದಿಗೆ),
ಕನ್ನಡ ಸಾಹಿತ್ಯ
ಪರಿಷತ್ತು, ಬೆಂಗಳೂರು.
ಈ. 1978, ಎಸ್.ಎಸ್. ಕೋತಿನ, ಸಾಹಿತ್ಯಭಂಡಾರ, ಹುಬ್ಬಳ್ಳಿ.
ಅನೇಕ
ವಿದ್ವಾಂಸರ ಪ್ರಕಾರ
ಈ ಕಾವ್ಯದಲ್ಲಿ ಚಾರಿತ್ರಿಕ
ಘಟನೆಗಳನ್ನು ಪರೋಕ್ಷವಾಗಿ
ಸೂಚಿಸಲಾಗಿದೆ. ಆಂಡಯ್ಯನ
ಆಶ್ರಯದಾತನಾಗಿದ್ದ ಕಾಮದೇವನು
ಜೈನನಾಗಿದ್ದು ಅವನು
ಹಿಂದೂ ದೊರೆಯಾದ
ಬಲ್ಲಾಳನನ್ನು ಸೋಲಿಸಿದನು.
ರಾಜಕೀಯ ಅಧಿಕಾರಕ್ಕಾಗಿ
ಜೈನ ಮತ್ತು ವೀರಶೈವರ
ನಡುವೆ ತೀವ್ರವಾದ
ಸ್ಪರ್ಧೆಯಿದ್ದ
ಮಧ್ಯಕಾಲೀನ ಕರ್ನಾಟಕದಲ್ಲಿ
ಇದು ಮಹತ್ವದ ಸಂಗತಿಯಾಗಿತ್ತು.
ಆದರೆ, ಚರಿತ್ರೆಮತ್ತು
ಪುರಾಣಗಳ ಈ ಸಂಯೋಜನೆಯನ್ನು
ಪರಿಣಾಮಕಾರಿಯಾಗಿ
ಸಾಧಿಸಲು ಕವಿಗೆ
ಸಾಧ್ಯವಾಗಿಲ್ಲ.
ಕಥೆಯ ಚೌಕಟ್ಟಿನಲ್ಲಿ
ಅನೇಕ ಪರಸ್ಪರ ವಿರೋಧಗಳಿವೆ.
ಈ
ಕಾವ್ಯದಲ್ಲಿ ನಿಸರ್ಗ
ವರ್ಣನೆ ಹಾಗೂ ಶೃಂಗಾರವರ್ಣನೆಗಳಿಗೆ
ಹೇರಳವಾದ ಅವಕಾಶವಿದೆ.
ಈ ಕಾವ್ಯದ ಅನೇಕ
ವರ್ಣನೆಗಳು ಸುಂದರವಾಗಿದ್ದು ಸನ್ನಿವೇಶಗಳನ್ನು
ಮನಸ್ಸಿಗೆ ಮುಟ್ಟಿಸುತ್ತವೆ.
ಇದರಲ್ಲಿ 275 ಪದ್ಯಗಳೂ
ಕೆಲವು ಗದ್ಯ ಭಾಗಗಳೂ
ಇವೆ.
‘ಕಬ್ಬಿಗರ ಕಾವ’ ಭಾಷೆಗೆ
ಸಂಬಂಧಿಸಿದ ಇನ್ನೊಂದು
ಕಾರಣಕ್ಕಾಗಿಯೂ
ಪ್ರಸಿದ್ಧವಾಗಿದೆ. ಆಂಡಯ್ಯನು
ತನ್ನ ಕಾವ್ಯದಲ್ಲಿ
ಸಂಸ್ಕೃತವನ್ನು
ಸಂಪೂರ್ಣವಾಗಿ ಕೈಬಿಟ್ಟು
ಕೇವಲ ಕನ್ನಡ ಪದಗಳನ್ನು
ಬಳಸುವೆನೆಂಬ ತೀರ್ಮಾನವನ್ನು
ಪ್ರಜ್ಞಾಪೂರ್ವಕವಾಗಿಯೇ
ತೆಗೆದುಕೊಳ್ಳುತ್ತಾನೆ.
ಪ್ರಾಯಶಃ ಸಂಸ್ಕೃತದ
ವ್ಯಾಪಕವಾದ ಬಳಕೆಯು
ಅನಿವಾರ್ಯವೆಂದು
ಹೇಳುತ್ತಿದ್ದ ಇತರ
ಕವಿಗಳನ್ನು ಗೇಲಿ
ಮಾಡಲು ಬಯಸಿರಬಹುದು.
ಆದರೆ, ಆಂಡಯ್ಯನು
ಸಂಸ್ಕೃತವನ್ನು
ಉಪಯೋಗಿಸುವ ಬಳಸುದಾರಿಯೊಂದನ್ನು
ಕಂಡುಕೊಳ್ಳುತ್ತಾನೆ.
ಅವನು ಕೇವಲ ತತ್ಸಮ
ಪದಗಳನ್ನು ಮಾತ್ರ
ಉಪಯೋಗಿಸುವುದಿಲ್ಲ.
(ತತ್ಸಮ ಎಂದರೆ, ಧ್ವನಿಯ
ನೆಲೆಯಲ್ಲಿ ಹಾಗೂ
ಅರ್ಥದ ನೆಲೆಯಲ್ಲಿ
ಯಾವುದೇ ಬದಲಾವಣೆಯನ್ನು
ಪಡೆಯದೆ, ಕನ್ನಡದಲ್ಲಿ
ಬಳಕೆಯಾಗುವ ಸಂಸ್ಕೃತ
ಪದಗಳು. ಆದರೆ, ತದ್ಭವ
ಪದಗಳನ್ನು ಬಳಸಲು
ಅವನಿಗೆ ಯಾವ ಅಭ್ಯಂತರವೂ
ಇಲ್ಲ. ಇಂತಹ ತದ್ಭವಗಳಲ್ಲಿ
ಧ್ವನಿಬದಲಾವಣೆಯು
ಸಾಮಾನ್ಯವಾಗಿಯೂ
ಅರ್ಥ ಬದಲಾವಣೆಯು
ಅಪರೂಪವಾಗಿಯೂ ಅಗುತ್ತದೆ.
ಹೀಗೆ ಟಕಬ್ಬಿಗರ
ಕಾವ’ ಹಿಂಬಾಗಿಲ
ಪ್ರವೇಶ ದೊರಕುತ್ತದೆ.
ಆದ್ದರಿಂದಲೇ ಈ ವಿಷಯದಲ್ಲಿ
ಆಂಡಯ್ಯನನ್ನು ಅನುಕರಿಸಿದವರು
ಬಹಳ ಕಡಿಮೆ.
ಏನೇ
ಇರಲಿ, ಈ ಪುಟ್ಟ ಕಾವ್ಯವು
ಅನೇಕ ಅಭಿಮಾನಿಗಳನ್ನು
ಪಡೆದಿದೆ. ಮತ್ತು
ಇದರಿಂದ ಆಯ್ದ ಭಾಗಗಳು
ಮತ್ತೆ ಮತ್ತೆ ಪಠ್ಯಪುಸ್ತಕಗಳಲ್ಲಿ
ಕಾಣಿಸಿಕೊಳ್ಳುತ್ತವೆ.
ಅ.
ಆಂಡಯ್ಯ, ಸಂ. ರಂ. ಶ್ರೀ.
ಮುಗಳಿ, 1949.
ಆ.
ಆಂಡಯ್ಯ, ಆರ್.ಬಿ.
ಪಾಟೀಲ್, 1937
ಇ.ಆಂಡಯ್ಯ, ಬಿ.ಎಸ್. ಕುಲಕರ್ಣಿ, 1965