ಕರ್ನಾಟಕ
ಕಾದಂಬರಿ
ಅ. 1933, ಕರ್ನಾಟಕ
ಕಾದಂಬರಿ ಸಂಗ್ರಹ,
ಸಂ. ಟಿ.ಎಸ್. ವೆಂಕಣ್ಣಯ್ಯ,
ಕನ್ನಡ ಪ್ರಕಟಣ ಮಾಲೆ,
ಮೈಸೂರು ವಿಶ್ವವಿದ್ಯಾಲಯ,
ಮೈಸೂರು
ಆ. 1973, ಕರ್ನಾಟಕ
ಕಾದಂಬರಿ, ಎನ್. ಅನಂತರಂಗಾಚಾರ್,
ಉಷಾ ಸಾಹಿತ್ಯಮಾಲೆ,
ಮೈಸೂರು.
ಇ. 1977, ಕರ್ನಾಟಕ
ಕಾದಂಬರಿ, (ಗದ್ಯಾನುವಾದದೊಂದಿಗೆ)
ಎಚ್. ನಾರಾಯಣಶಾಸ್ತ್ರೀ,
ಕನ್ನಡ ಸಾಹಿತ್ಯ
ಪರಿಷತ್ತು, ಬೆಂಗಳೂರು.
ಈ. ಕರ್ನಾಟಕ ಕಾದಂಬರಿ, ಸಂ. ಸಿ.ಪಿ. ಕೃಷ್ಣಕುಮಾರ್, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಮೈಸೂರು.
ಕಾದಂಬರಿಯು ಆ ಕಾಲದ ಜೀವನಕ್ರಮ
ಮತ್ತು ಸಾಂಸ್ಕೃತಿಕ
ಸನ್ನಿವೇಶಗಳ ಕೆಲವು ನೆಲೆಗಳಿಗೆ
ಹಿಡಿದ ಕನ್ನಡಿ.
ಅದು ಸಾವುಗಳನ್ನು
ಮೀರಿ ಬೆಳೆಯುವ,
ಉಳಿಯುವ ಆದರ್ಶಪ್ರೇಮದ
ಕಥೆ. ಈ ಕಾವ್ಯದ ಪ್ರಮುಖ
ಪಾತ್ರಗಳು, ಕೆಲವು
ಜನ್ಮಗಳಲ್ಲಿ ಹರಡಿಕೊಂಡ
ವಿರಹ ಮಿಲನಗಳ ಪಯಣದ
ನಂತರವೇ ತಮ್ಮ ಒಲವಿನ
ನೆಲೆಯನ್ನು ತಲುಪುತ್ತಾರೆ.
ಮಹಾಶ್ವೇತಾ, ಕಾದಂಬರಿ,
ಚಂದ್ರಾಪೀಡ ಮುಂತಾದ
ಪಾತ್ರಗಳು ಕನ್ನಡದ
ಸಾಹಿತ್ಯಪ್ರೇಮಿಗಳ
ಮನಸ್ಸಿನಲ್ಲಿ ಬಹು
ಕಾಲದಿಂದ ನೆಲೆಸಿವೆ.
ಇದು ಕಾದಂಬರಿ-ಚಂದ್ರಾಪೀಡ
ಮತ್ತು ಮಹಾಶ್ವೇತಾ-ಪುಂಡರೀಕ
ಎಂಬ ಎರಡು ಜೋಡಿಗಳ
ಪ್ರಣಯ ಕಥಾನಕ. ಕಥೆಯ
ಹಂದರವು ಹಿಮಾಲಯದ
ಮಂಜುಮುಸುಕಿದ ಶಿಖರಗಳಿಂದ
ಹಿಡಿದು, ರಾಜಾಸ್ಥಾನ-ಅಂತಃಪುರಗಳ
ವೈಭವದವರೆಗೆ ಹರಡಿಕೊಂಡಿದೆ.
ನಾಗವರ್ಮನು ಇವೆರಡಕ್ಕೂ
ನ್ಯಾಯವನ್ನು ಒದಗಿಸುವ
ಕವಿತಾ ಶಕ್ತಿಯನ್ನು
ಹೊಂದಿದ್ದಾನೆ. ಅವನು
ಮಾಡಿರುವ ಹಿಮಾಲಯದ
ವರ್ಣನೆಯು ಉಸಿರು
ಹಿಡಿಯುವಷ್ಟು ಚೆಲುವಾಗಿವೆ.
ಈ ಕಾವ್ಯದಲ್ಲಿ ಸ್ತ್ರೀ
ಪಾತ್ರಗಳಿಗೇ ಮೊದಲ
ಮಣೆಯೆಂದರೂ ತಪ್ಪಲ್ಲ.
ಅದರಲ್ಲಿಯೂ ಕಾದಂಬರಿ
ಮತ್ತು ಮಹಾಶ್ವೇತೆಯರ
ಪಾತ್ರಗಳು ಬಹಳ ಪರಿಣಾಮಕಾರಿಯಾಗಿವೆ.
ವೈಶಂಪಾಯನ ಗಿಳಿಯ
ಕಥೆಯು ಇನ್ನೊಂದು
ಹೃದಯಂಗಮವಾದ ಪ್ರಸಂಗ.
ಇವೆಲ್ಲದರ ಪರಿಣಾಮವಾಗಿ ಕಾದಂಬರಿಯು ಹಳಗನ್ನಡದ ಸರ್ವಶ್ರೇಷ್ಠ ಕೃತಿಗಳಲ್ಲಿ ಒಂದಾಗಿ ಉಳಿದುಕೊಂಡಿದೆ.
ಅ. ಒಂದನೆಯ
ನಾಗವರ್ಮ, ಕನ್ನಡ
ಕವಿ-ಕಾವ್ಯ ಪರಂಪರೆ,
ಸಂ. ವಿ.ಸೀತಾರಾಮಯ್ಯ,
1976, ಐ.ಬಿ.ಎಚ್. ಪ್ರಕಾಶನ,
ಬೆಂಗಳೂರು.
ಆ. ನಾಗವರ್ಮನ
ಕರ್ನಾಟಕ ಕಾದಂಬರಿ
(ಒಂದು ತೌಲನಿಕ ಮತ್ತು
ವಿಮರ್ಶಾತ್ಮಕ ಅಧ್ಯಯನ),
ಸಿ.ಪಿ. ಕೃಷ್ಣಕುಮಾರ್,
1976, ಮೈಸೂರು.
ಇ. ಇಪ್ಪತ್ತನೆಯ ಶತಮಾನದ ಮೊದಲ ದಶಕಗಳಲ್ಲಿ ಮಡಿವಾಳೇಶ್ವರ ಗಂಗಾಧರ ತೂರಮುರಿಯವರು ಮಾಡಿದ ಗದ್ಯಾನುವಾದವು ಬಹಳ ಪ್ರಸಿದ್ಧವಾಗಿದೆ.