ಕುಮಾರವ್ಯಾಸ
ಭಾರತ
ಅ. 1877, ಸಿದ್ಧಾಂತಿ
ಸುಬ್ರಹ್ಮಣ್ಯಶಾಸ್ತ್ರೀ
ಮತ್ತು ಸಾ. ತಿರುವೆಂಕಟಾಚಾರ್ಯ,
ಸರಸ್ವತೀ ನಿಲಯ ಮುದ್ರಾಕ್ಷರಶಾಲೆ,
ಮದ್ರಾಸು.
ಆ. 1888, ವಾಗೀಶ್ವರ
ಮುದ್ರಾಕ್ಷರಶಾಲೆ,
ಬೆಂಗಳೂರು
ಇ. 1909, ಕನ್ನಡ ಮಹಾಭಾರತ
ದಶಪರ್ವ, ನಂಜನಗೂಡು
ಶ್ರೀಕಂಠಶಾಸ್ತ್ರೀ,
ವಾಣೀವಿಲಾಸ ಬುಕ್
ಡಿಪೋ, ಮೈಸೂರು.
ಈ. 1916, ಕನ್ನಡ ಮಹಾಭಾರತ
ದಶಪರ್ವ, ವಾಜಪೇಯಂ
ಗೋವಿಂದಯ್ಯ
ಉ. ದಶಪರ್ವ,
ಸಂ. ಭಾರತೀ ಸಂಪಂಗೀರಾಮಯ್ಯ,
ಸರಸ್ವತೀ ರತ್ನಾಕರ
ಬುಕ್ ಡಿಪೋ, ಬೆಂಗಳೂರು
ಊ. 1936, ಶ್ರೀಮನ್ಮಹಾಭಾರತ
ದಶಪರ್ವವು, ಚಿಕ್ಕಪೇಟೆ
ಬುಕ್ ಡಿಪೋ, ಬೆಂಗಳೂರು
ಋ. 1958, ಕರ್ಣಾಟ
ಭಾರತ ಕಥಾಮಂಜರಿ,
ಸಂ. ಮಾಸ್ತಿ ವೆಂಕಟೇಶ
ಅಯ್ಯಂಗಾರ್ ಮತ್ತು
ಕುವೆಂಪು, ಕನ್ನಡ
ಮತ್ತು ಸಂಸ್ಕೃತಿ
ಇಲಾಖೆ, ಕರ್ನಾಟಕ
ಸರ್ಕಾರ, ಬೆಂಗಳೂರು.
(ಈ ಆವೃತ್ತಿಯು ಕ್ರಿ.ಶ.
1554 ರಷ್ಟು ಹಿಂದೆಯೇ
ಬರೆದ ಓಲೆಗರಿ ಪ್ರತಿಯನ್ನು
ಬಳಸಿಕೊಂಡಿದೆ.)
ಎ.
1972, ಕುಮಾರವ್ಯಾಸ
ಭಾರತ ಸಂಗ್ರಹ, ತ.ಸು.
ಶಾಮರಾಯ, ಸಾಹಿತ್ಯ
ಅಕಾಡೆಮಿ, ನವ ದೆಹಲಿ
ಏ.
1990, ಕುಮಾರವ್ಯಾಸ
ಭಾರತ ಸಂಗ್ರಹ, ಬಿ.ಎಂ.ಶ್ರೀ.
ಪ್ರತಿಷ್ಠಾನ, ಬೆಂಗಳೂರು.
ಐ.
2007, ಕನ್ನಡ ಭಾರತಗಳು,
ಸಂ. ಎ.ವಿ. ಪ್ರಸನ್ನ,
ಕನ್ನಡ ವಿಶ್ವವಿದ್ಯಾಲಯ,
ಹಂಪಿ
ಒ.
2008, ಕುಮರವ್ಯಾಸ ಭಾರತ,
ಸಂ. ಎ.ಆರ್. ಸೇತೂರಾಮರಾವ್,
ಕಾಮಧೇನು ಪ್ರಕಾಶನ,
ಬೆಂಗಳೂರು.
(ಈ ಕಾವ್ಯದ ಪರ್ವಗಳನ್ನು ಬಿಡಿ ಬಿಡಿಯಾಗಿ, ಗ್ರಂಥಸಂಪಾದನೆಯ ಶಿಸ್ತಿಗೆ ಒಳಪಡಿಸಿ ಪ್ರಕಟಿಸಲಾಗಿದೆ. ಈ ನಿಟ್ಟಿನಲ್ಲಿ ಮೈಸೂರಿನ ಓರಿಯೆಂಟಲ್ ರಿಸರ್ಚ್ ಇನ್ಸ್ಟಿಟ್ಯೂಟ್ ಮಾಡಿರುವ ಕೆಲಸವು ಬಹಳ ದೊಡ್ಡದು. ವಿ. ಶ್ಯಾಮಾಚಾರ್, ಎಸ್.ಎನ್, ಕೃಷ್ಣಜೋಯಿಸ, ಡಿ.ಎಲ್. ನರಸಿಂಹಾಚಾರ್, ಡಿ.ಶ್ರೀನಿವಾಸಾಚಾರ್, ಎಂ.ಎಸ್. ಬಸವಲಿಂಗಯ್ಯ, ಎನ್. ಅನಂತರಂಗಾಚಾರ್ ಮುಂತಾದ ಹಿರಿಯರು ಈ ಕೆಲಸವನ್ನು ಬಹಳ ಶ್ರದ್ಧೆಯಿಂದ ನೆರವೇರಿಸಿದ್ದಾರೆ. ಅನೇಕ ಸಂಗ್ರಹಗಳೂ ಹೊರಬಂದಿವೆ.
‘ಕುಮಾರ
ವ್ಯಾಸ ಭಾರತ’ವು
ಮೂಲ ಸಂಸ್ಕೃತ ಕಾವ್ಯದ
ಮೊದಲ ಹತ್ತು ಪರ್ವಗಳನ್ನು
ಮಾತ್ರ ಆರಿಸಿಕೊಂಡಿದೆ. ಅದು ಆದಿಪರ್ವದಿಂದ
ಮೊದಲಾಗಿ ಗದಾಪರ್ವದೊಂದಿಗೆ
ಮುಗಿಯುತ್ತದೆ. ಅದರಲ್ಲಿ
152 ಸಂಧಿಗಳೂ ಸುಮಾರು
8200 ಪದ್ಯಗಳೂ ಇವೆ. ಅವೆಲ್ಲವೂ
ಭಾಮಿನೀ ಷಟ್ಪದಿಯನ್ನೇ
ಬಳಸಿಕೊಂಡಿವೆ. ಈ
ಛಂದೋರೂಪವು, ಕವಿಯ
ಆಶಯಗಳಿಗೆ ತಕ್ಕ
ಹಾಗೆ ಬಾಗುವ ಬಳುಕುವ
ಸಾಮರ್ಥ್ಯವನ್ನು
ಹೊಂದಿದೆ. ಅವನು
ಅನೇಕ ಮರಾಠೀ ಪದಗಳನ್ನು
ಸಹಜವಾಗಿಯೇ ಬಳಸುತ್ತಾನೆ.
ತನ್ನ ಪ್ರದೇಶದ ಉಪಭಾಷೆಯನ್ನು
ಆಗೀಗ ಬಳಸಲು ಅವನಿಗೆ
ಯಾವ ಸಂಕೋಚವೂ ಇಲ್ಲ.
ಈ ಕಾವ್ಯವು
ಬಹುಮಟ್ಟಿಗೆ ವ್ಯಕ್ತಿನಿಷ್ಠವಾದುದು.
ತನ್ನ ಕಾವ್ಯದ ಆಗುಹೋಗುಗಳಲ್ಲಿ
ಕವಿಯು ಸಂಪೂರ್ಣವಾಗಿ
ಮಗ್ನನಾಗಿರುತ್ತಾನೆ.
ಅವನು ಪೌರಾಣಿಕ ಪಾತ್ರಗಳನ್ನು,ನಮ್ಮ
ದಿನಬಳಕೆಯ ಮನುಷ್ಯರಾಗಿ
ಬದಲಾಯಿಸುತ್ತಾನೆ.
ಇದರ ಪರಿಣಾಮವಾಗಿ
ಅವರು ನಮಗೆ ಸುಪರಿಚಿತರಾಗುತ್ತಾರೆ.
ಆದ್ದರಿಂದಲೇ ಭೀಮ,
ದ್ರೌಪದಿ, ಕರ್ಣ,
ದುರ್ಯೋಧನ, ಅರ್ಜುನ,
ಕೃಷ್ಣ ಮುಂತಾದ
ಪಾತ್ರಗಳು ಕನ್ನಡ
ಕೇಳುಗ/ಓದುಗ ಸಮುದಾಯದ
ನೆನಪಿನಲ್ಲಿ ಅಚ್ಚೊತ್ತಿದ್ದಾರೆ.
ಅಷ್ಟೇ ಯಾಕೆ, ಗೌಣಪಾತ್ರಗಳಾದ
ಉತ್ತರಕುಮಾರ, ಅಭಿಮನ್ಯು
ಮತ್ತು ಬಕಾಸುರರು
ಕೂಡ ಕನ್ನಡ ಮನಸ್ಸಿನ
ಭಾಗವೇ ಆಗಿಬಿಟ್ಟಿದ್ದಾರೆ.
ಇಲ್ಲಿನ ಪಾತ್ರಗಳು
ನಮ್ಮ ನಿಮ್ಮಂತಹ
ಮನುಷ್ಯರಿಗಿಂತ
ಮೇಲೆಯೂ ಹೋಗುವುದಿಲ್ಲ,
ಕೆಳಗೂ ಹೋಗುವುದಿಲ್ಲ.
ಅವರು ನಮ್ಮಂತಹವರೇ
ಆಗಿಬಿಡುತ್ತಾರೆ.
ಹೀಗೆ ಕಥೆ, ಪಾತ್ರಗಳು
ಮತ್ತು ಶೈಲಿ ಮೂರನ್ನೂ
ಬದಲಿಸಿಕೊಂಡಿರುವುದು
ಕುಮಾರವ್ಯಾಸ ಭಾರತದ
ಹೊಸತನ ಮತ್ತು ಯಶಸ್ಸಿಗೆ
ಕಾರಣವಾಗಿದೆ. ಇಲ್ಲಿನ
ಪಾತ್ರಗಳು ಜಡವಲ್ಲ.
ಜೀವನದೊಂದಿಗೆ ಬೆಳೆಯುತ್ತಾ
ಮಾಗುತ್ತಾ ಹೋಗುವ
ಇಂತಹ ಪಾತ್ರಗಳು
ಕಾವ್ಯವನ್ನೂ ಬೆಳೆಸುತ್ತವೆ.
ಈ ಕವಿಯು
ಮನುಷ್ಯ ಭಾವನೆಗಳನ್ನು
ನಿರ್ವಹಿಸುವುದರಲ್ಲಿ
ಬಹಳ ಪ್ರತಿಭಾಶಾಲಿ.
ಒಂದು ಭಾವನೆಯಿಂದ
ಮತ್ತೊಂದಕ್ಕೆ ಚಲಿಸುವ
ಕ್ರಿಯೆಯು ಬಹಳ ಸಹಜವಾಗಿ
ನಡೆಯುತ್ತದೆ. ಇತರ
ಅನೇಕ ಮಹಾಕಾವ್ಯಗಳಂತೆ
ಇದು ಕೂಡ ಘಟನಾತ್ಮಕವಾದುದು.
ಎಲ್ಲ ಘಟನೆಗಳನ್ನೂ
ಒಟ್ಟುಗೂಡಿಸುವ
ದಾರವೆಂದರೆ, ಪಾಂಡವರ
ಕಥೆ. ಈ ಕಾವ್ಯದ ಲೋಕದರ್ಶನವು
ಪಾರಂಪರಿಕವಾದ ಹಿಂದೂಧರ್ಮದ
ಆಶಯಗಳನ್ನು ಮೀರುವುದು
ಬಹಳ ಕಡಿಮೆ. ಆದರೆ,
ಕವಿಯು ತನಗಿರುವ
ಮಾನವೀಯ ಕಾಳಜಿಗಳ
ಫಲವಾಗಿ ಈ ಪರಿಮಿತಿಗಳನ್ನು
ಮೀರಿ, ಯಶಸ್ವಿಯಾಗುತ್ತಾನೆ.
ಅ. ‘ಕುಮಾರವ್ಯಾಸ
ಪ್ರಶಸ್ತಿ’, 1940, ಮೈಸೂರು
ವಿಶ್ವವಿದ್ಯಾಲಯ
ಸಂಘ, ಮೈಸೂರು.
ಆ. ‘ಕರ್ಣನ
ಮೂರು ಚಿತ್ರಗಳು’, 1947, ಶಂ.ಬಾ. ಜೋಶಿ,
ಇ. ‘ಕುಮಾರವ್ಯಾಸ’, ಎಸ್.ವಿ. ರಂಗಣ್ಣ, 1949,
(ಮೂರನೆಯ ಮುದ್ರಣ).
ಪ್ರಸಾರಾಂಗ, ಮೈಸೂರು ವಿಶ್ವವಿದ್ಯಾಲಯ,
ಮೈಸೂರು
ಈ. ‘ಕುಮಾರವ್ಯಾಸ
ವಾಣಿ’,
ಎಸ್.ವಿ. ರಂಗಣ್ಣ, 1949, ಪ್ರಸಾರಾಂಗ,
ಮೈಸೂರು ವಿಶ್ವವಿದ್ಯಾಲಯ,
ಮೈಸೂರು.
ಉ. ‘ಕುಮಾರವ್ಯಾಸ’, ಕೀರ್ತಿನಾಥ
ಕುರ್ತಕೋಟಿ, 1975, ಸಾಹಿತ್ಯ
ಅಕಾಡೆಮಿ, ನವ ದೆಹಲಿ.
ಊ. ‘ಕುಮಾರವ್ಯಾಸ-
ಸಾಂಸ್ಕೃತಿಕ ಮುಖಾಮುಖಿ’, ಸಂ. ರಹಮತ್ ತರೀಕೆರೆ,
ಕನ್ನಡ ವಿಶ್ವವಿದ್ಯಾಲಯ,
ಹಂಪಿ.
ಋ. ‘ಕುಮಾರವ್ಯಾಸ,
ಕವಿ-ಕಾವ್ಯ ಪರಂಪರೆ’, ಸಂ. ವಿ. ಸೀತಾರಾಮಯ್ಯ,
1973, ಐ.ಬಿ.ಎಚ್. ಪ್ರಕಾಶನ,
ಬೆಂಗಳೂರು
ಎ. ‘ಕುಮಾರವ್ಯಾಸ’, ಸಂ. ಶ್ಯಾಮಸುಂದರ
ಬಿದರಕುಂದಿ, ಕರ್ನಾಟಕ
ಸಾಹಿತ್ಯ ಅಕಾಡೆಮಿ,
ಬೆಂಗಳೂರು.
ಏ. ‘ಕುಮಾರವ್ಯಾಸ
ಮತ್ತು ಕೃಷ್ಣ ಕಥೆ’, ಎನ್ಕೆ, 1968, ಕರ್ನಾಟಕ
ಸಹಕಾರೀ ಪ್ರಕಾಶನ
ಮಂದಿರ, ಬೆಂಗಳೂರು.
ಐ. ‘ಗದುಗಿನ ಭಾರತ-ಒಂದು
ಸಾಂಸ್ಕೃತಿಕ ಅಧ್ಯಯನ’, ದೇ. ಜವರೇಗೌಡ,
1978, ಧಾರವಾಡ.
ಒ. ‘ಮಹಾಭಾರತ
ಸಮೀಕ್ಷೆ’, ಎನ್ .ಸುಬ್ರಹ್ಮಣ್ಯಂ,
1973, ಮೈಸೂರು.
ಓ. ಕರ್ಣಾಟ
ಭಾರತ ಕಥಾಮಂಜರಿ,
ಸಂ. ಮಾಸ್ತಿ ಮತ್ತು
ಕುವೆಂಪು, ಅದರ ತೋರಣ
ನಾಂದಿ
ಔ. ‘Lingustic
Analysis of Kumaravyasa Bharatha’,
S. Onkarappa, 1994,
ಅಂ. ‘Mahabharatha
and Variations, Perundevanar and